ಆರೋಗ್ಯಕರವಾದ ದಾಸವಾಳ ಟೀ ಮಾಡುವುದು ಹೇಗೆ?

ಹೀಗೆ ಜಗತ್ತು 2023ಕ್ಕೆ ವಿದಾಯ ಹೇಳಿ ಉಜ್ವಲ ಭವಿಷ್ಯದ ಭರವಸೆಯೊಂದಿಗೆ 2024ರ ಹೊಸ ವರ್ಷವನ್ನು ಸ್ವಾಗತಿಸಿದೆ. ಹೊಸ ವರ್ಷದ ಮುನ್ನಾ ದಿನವಾದ ಡಿಸೆಂಬರ್ 31ರಂದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸೇರಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು, ಪಾರ್ಟಿ ಆಯೋಜಿಸಲಾಗುತ್ತದೆ. ಜನವರಿ 1ರ ಮಹತ್ವ, ಹೊಸ ವರ್ಷ ಆಚರಣೆಯ ಇತಿಹಾಸ, ಸಂಪ್ರದಾಯಗಳ ವಿವರ ಇಲ್ಲಿದೆ (New Year 2024).
ಜನವರಿ 1ರಂದು ವರ್ಷಾಚರಣೆ ಯಾಕೆ?
ಕ್ರಿ.ಪೂ. 45ರಲ್ಲಿ ಜನವರಿ 1 ಅನ್ನು ಮೊದಲ ಬಾರಿಗೆ ಹೊಸ ವರ್ಷದ ಪ್ರಾರಂಭವೆಂದು ಆಚರಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಅದಕ್ಕೂ ಮೊದಲು ರೋಮನ್ ಕ್ಯಾಲೆಂಡರ್ ಪ್ರಕಾರ ಮಾರ್ಚ್ ಅನ್ನು ವರ್ಷಾರಂಭ ಎಂದು ಪರಿಗಣಿಸಲಾಗುತ್ತಿತ್ತು. ರೋಮನ್ ಕ್ಯಾಲೆಂಡರ್ ಪ್ರಕಾರ ವರ್ಷಕ್ಕೆ 355 ದಿನಗಳು. ರೋಮನ್ ಸರ್ವಾಧಿಕಾರಿ ಜ್ಯೂಲಿಯಸ್ ಸೀಸರ್ ಅಧಿಕಾರಕ್ಕೆ ಬಂದ ನಂತರ ಕ್ಯಾಲೆಂಡರ್ ಅನ್ನು ಬದಲಾಯಿಸಿ ಜನವರಿ 1 ಅನ್ನು ವರ್ಷದ ಮೊದಲ ದಿನವನ್ನಾಗಿಸಿದರು. ರೋಮನ್ ದೇವತೆ ಜಾನುಸ್‌ನ ಗೌರವಾರ್ಥ ಮೊದಲ ತಿಂಗಳಿಗೆ ಜನವರಿ ಎಂದು ಹೆಸರಿಡಲಾಗಿತ್ತು ಎನ್ನುತ್ತದೆ ಇತಿಹಾಸ.
16ನೇ ಶತಮಾನದ ಬಳಿಕ ಜನಪ್ರಿಯ
ಯುರೋಪ್‌ನ ಬಹುತೇಕ ಕಡೆಗಳಲ್ಲಿ ಕ್ರಿ.ಶ. 16ನೇ ಶತಮಾನದ ಮಧ್ಯಭಾಗದ ತನಕವೂ ಜ್ಯೂಲಿಯಸ್ ಸೀಸರ್‌ನ ಈ ಪರಿಕಲ್ಪನೆಯ ಕ್ಯಾಲೆಂಡರ್ ಅನ್ನು ಜನರು ಒಪ್ಪಿಕೊಂಡಿರಲಿಲ್ಲ. ಕ್ರಿಶ್ಚಿಯನ್ ಧರ್ಮ ವ್ಯಾಪಕ ಆಗುವುದರೊಂದಿಗೆ ಹೊಸ ವರ್ಷದ ಆರಂಭವಾಗಿ ಜನವರಿ 1 ಅನ್ನು ಪೇಗನ್ ಎಂದೂ ಡಿಸೆಂಬರ್ 25 ಅನ್ನು ಯೇಸುವಿನ ಜನನ ದಿನ ಎಂದೂ ಪರಿಗಣಿಸಲ್ಪಟ್ಟಿತು. ಪೋಪ್ ಗ್ರೆಗೊರಿ ಜ್ಯೂಲಿಯನ್ ಕ್ಯಾಲೆಂಡರ್ ಅನ್ನು ಸುಧಾರಿಸಿದ ನಂತರ ಜನವರಿ 1 ಅನ್ನು ಹೊಸ ವರ್ಷದ ಮೊದಲ ದಿನ ಎಂದು ಸ್ವೀಕರಿಸಲಾಯಿತು. ಹೊಸ ವರ್ಷ ಆಚರಣೆಯು ಪ್ರಾಚೀನ ಬ್ಯಾಬಿಲೋನ್‌ನಲ್ಲಿ ಸುಮಾರು 4,000 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ. 2,000ದಲ್ಲಿ ಹುಟ್ಟಿಕೊಂಡಿತು. ಬ್ಯಾಬಿಲೋನಿಯನ್ನರು ಹೊಸ ವರ್ಷವನ್ನು ಅಕಿಟು ಎಂಬ 11-ದಿನಗಳ ಆಚರಣೆಯನ್ನಾಗಿ ನಡೆಸುತ್ತಿದ್ದರು.
ಆಚರಣೆ ಹೇಗೆ?
ಅನೇಕ ದೇಶಗಳಲ್ಲಿ ಹೊಸ ವರ್ಷದ ಆಚರಣೆಗಳು ಡಿಸೆಂಬರ್ 31ರಂದೇ ಪ್ರಾರಂಭವಾಗುತ್ತವೆ. ಇದು ಹೊಸ ವರ್ಷದ ಮುನ್ನಾದಿನ ಎಂದು ಕರೆಯಲ್ಪಡುತ್ತದೆ. ಈ ಆಚರಣೆ ಜನವರಿ 1ರ ನಸುಕಿನ ತನಕ ಮುಂದುವರಿಯುತ್ತದೆ. ಈ ವೇಳೆ ಪಟಾಕಿ ಸಿಡಿಸುವುದು, ಪಾರ್ಟಿ ಮಾಡುವುದು ಸಾಮಾನ್ಯ. ಹೊಸ ವರ್ಷದ ಆರಂಭವು ಸಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗುವ ಉತ್ತಮ ಸಮಯವೂ ಹೌದು. ಅದಕ್ಕಾಗಿಯೇ ಅನೇಕರು ಹೊಸ ವರ್ಷದ ಮೊದಲ ದಿನವೇ ಉತ್ತಮ ನಿರ್ಣಯಗಳನ್ನು ಕೈಗೊಳ್ಳುತ್ತಾರೆ.
Comments
Post a Comment