ಆರೋಗ್ಯಕರವಾದ ದಾಸವಾಳ ಟೀ ಮಾಡುವುದು ಹೇಗೆ?
ದಾಸವಾಳ ಟೀ ಅಥವಾ 'ಅಗುವಾ ಡಿ ಜಮೈಕಾ' ಎಂದೂ ಕರೆಯಲಾಗುತ್ತದೆ. ದಾಸವಾಳ ಟೀ ಮಾಡಲು ಕೇವಲ 3 ಪದಾರ್ಥಗಳು ಸಾಕು. ಈ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ, ಉತ್ತಮ ನಿದ್ರೆಗೂ ಸಹಕಾರಿಯಾಗಿದೆ.
ಬೇಕಾಗುವ ಪದಾರ್ಥಗಳು:
ಒಣ ದಾಸವಾಳ ದಳ - 1 ಕಪ್
ನೀರು - 2 ಕಪ್, 1 ಲೀಟರ್
ಸಕ್ಕರೆ ಪುಡಿ - 1 ಕಪ್
ತಂಪಾದ ನೀರು - 1 ಲೀಟರ್
ಐಸ್ ಕ್ಯೂಬ್ಸ್ - ಅಗತ್ಯಕ್ಕೆ ತಕ್ಕಂತೆ
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ, ಅದರಲ್ಲಿ ಒಣಗಿದ ದಾಸವಾಳ ದಳಗಳನ್ನು ಸೇರಿಸಿ, ಬಿಸಿ ಮಾಡಿ. ನಂತರ ಕುದಿ ಬಂದ ತಕ್ಷಣ ಉರಿಯನ್ನು ಕಡಿಮೆ ಮಾಡಿ, ಸುಮಾರು 15 ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು. ಮತ್ತೊಂದು ಪಾತ್ರೆಯಲ್ಲಿ 1 ಲೀಟರ್ ತಂಪಾದ ನೀರಿಗೆ ಸಕ್ಕರೆ ಪುಡಿ ಹಾಕಿ ಅದು ಕರಗುವತನಕ ಮಿಶ್ರಣ ಮಾಡಿ. ದಾಸವಾಳ ಹಾಗೂ ನೀರಿನ ಮಿಶ್ರಣವನ್ನು ಶಾಖದಿಂದ ತೆಗೆದುಹಾಕಿ ಸುಮಾರು 30 ನಿಮಿಷ ತಣ್ಣಗಾಗಲು ಬಿಡಿ. 30 ನಿಮಿಷಗಳ ನಂತರ ದಾಸವಾಳದ ದಳಗಳನ್ನು ನೀರಿನಿಂದ ಪ್ರತ್ಯೇಕಿಸಿ ನಂತರ ಸಕ್ಕರೆ ಸೇರಿಸಿದ ನೀರಿಗೆ ದಾಸವಾಳದ ದ್ರವವನ್ನು ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಐಸ್ ಕ್ಯೂಬ್ ಸೇರಿಸಿ ಗ್ಲಾಸ್‌ಗಳಲ್ಲಿ ಬಡಿಸಿ, ದಾಸವಾಳ ಟೀಯನ್ನು ಕುಡಿಯಿರಿ.
Comments
Post a Comment